ವಾರದಲ್ಲಿ 6 ದಿನ ಹೊಸ ಇಂಟರ್‌ಸಿಟಿ ರೈಲು ಸಂಚರಿಸಲಿದೆ. ಪ್ರತಿ ದಿನ ಬೆಳಗ್ಗೆ 7ಗಂಟೆಗೆ ಬೀದರನಿಂದ ಹೊರಡುವ ರೈಲು (ಸಂಖ್ಯೆ 17009) 9:45ಕ್ಕೆ ಹೈದ್ರಾಬಾದ್‌ಗೆ ತಲುಪಲಿದೆ. ಪುನಃ ಸಂಜೆ 6:30ಕ್ಕೆ ಹೈದ್ರಾಬಾದ್‌ನಿಂದ ಬಿಡುವ ರೈಲು (ಸಂಖ್ಯೆ 17010) ರಾತ್ರಿ 9ಕ್ಕೆ ಬೀದರ ತಲುಪಲಿದೆ.
ಸುಮಾರು 15 ಬೋಗಿಗಳನ್ನು ಹೊಂದಿರುವ ಈ ಇಂಟರ್‌ಸಿಟಿ ರೈಲಿನಲ್ಲಿ ಒಂದು ಏರ್‌ಕಂಡಿಶನರ್ ಚೇರ್ ಸೌಲಭ್ಯದ ಬೋಗಿ ಸೇರಿದೆ. ರೈಲು ಬೀದರನಿಂದ ರೈಲ್ವೆ ನಿಲ್ದಾಣದಿಂದ ಹೊರಟು ಜಹೀರಾಬಾದ, ವಿಕಾರಾಬಾದ, ಶಂಕರಪಳ್ಳಿ, ಲಿಂಗನಪಳ್ಳಿ ರೈಲು ಸ್ಟೇಷನ್‌ಗಳ ಮೂಲಕ ಹೈದ್ರಾಬಾದ ನಿಲ್ದಾಣಕ್ಕೆ ತಲುಪುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಇಂಟರ್‌ಸಿಟಿಯಿಂದ ಅನುಕೂಲ :
ಬೀದರನಿಂದ ಹೈದ್ರಾಬಾದ ನಡುವೆ ಕೇವಲ 158 ಕಿ.ಮೀಗಳ ಅಂತರ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ವ್ಯಾಪಾರಿಗಳು ವ್ಯಾಪಾರೋದ್ಯಮಕ್ಕೆ ಹೈದ್ರಾಬಾದ ಮೇಲೆ ಅವಲಂಬಿತರಾಗಿದ್ದು, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಸಂಚರಿಸುತ್ತಾರೆ. ಈಗ ಇಂಟರ್‌ಸಿಟಿ ರೈಲಿನಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಲಿದೆ.
ಜೊತೆಗೆ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಜಿಲ್ಲೆಗೆ ಹೈದ್ರಾಬಾದನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೀದರಗೆ ಪ್ರವಾಸ ಕೈಗೊಳ್ಳಲು ಅನುಕೂಲವಾಗಲಿದೆ. ಇದರಿಂದ ಬೀದರ ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟೂ ಸಾಥ್ ನೀಡಿದಂತಾಗುತ್ತದೆ ಎನ್ನುತ್ತಾರೆ ತಜ್ಞರು.
ಸದ್ಯ ಬೀದರನಿಂದ ಹೈದ್ರಾಬಾದ್‌ಗೆ ರಸ್ತೆ ಮೂಲಕ ಪ್ರತಿ 15 ನಿಮಿಷಕ್ಕೆ ಒಮ್ಮೆಯಂತೆ ರಾಜ್ಯ ಸಾರಿಗೆ ಮತ್ತು ಆಂಧ್ರ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ರಾಜ್ಯ ಸಾರಿಗೆ 98 ರೂ. ಮತ್ತು ಆಂಧ್ರ ಸಾರಿಗೆ 102 ರೂ. ಟಿಕೇಟ್ ದರ ವಿಧಿಧಿಸುತ್ತವೆ. ಈ ಹೊಸ ರೈಲಿನಲ್ಲಿ ಕೇವಲ 35ರಿಂದ 40 ರೂ. ದರ ನಿಗದಿಯಾಗಲಿದ್ದು, ಇದರಿಂದ ಪ್ರಯಾಣಿಕರ ಆರ್ಥಿಕ ಹೊರೆ ಇಳಿಸಿದಂತಾಗುತ್ತದೆ.
ಸೆಪ್ಟೆಂಬರ 10ರಂದು ಬೆಳಗ್ಗೆ 10ಗಂಟೆಗೆ ರಾಜ್ಯ ರೈಲ್ವೆ ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಸಂಸದ ಧರಂಸಿಂಗ್ ಇಂಟರ್‌ಸಿಟಿ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
More:http://www.udayavani.com/news/186979L15-%E0%B2%95--%E0%B2%A8-%E0%B2%97--%E0%B2%B0-%E0%B2%B2--%E0%B2%AC-%E0%B2%9F-%E0%B2%9F%E0%B2%B0----.html
No comments:
Post a Comment